/newsfirstlive-kannada/media/post_attachments/wp-content/uploads/2024/06/ROHIT_GILL.jpg)
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಇದುವರೆಗೆ ಆಡುತ್ತಿತ್ತು. ರೋಹಿತ್ ಮೂರು ಮಾದರಿಯ ಕ್ರಿಕೆಟ್ಗೆ ಒಬ್ಬರೇ ನಾಯಕರಾಗಿದ್ದರು. ಸದ್ಯ ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾಗೆ ನಾಯಕ ಯಾರು ಎಂಬ ಪ್ರಶ್ನೆಗೆ ಬಿಸಿಸಿಐ ಹೊಸ ಉತ್ತರ ಕೊಟ್ಟಿದೆ. ಮುಂದಿನ ತಿಂಗಳಿನಿಂದ ಆರಂಭವಾಗುವ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಟೂರ್ನಿಗೆ ಶುಭ್ಮನ್ ಗಿಲ್ ಅವರನ್ನ ಕ್ಯಾಪ್ಟನ್ ಆಗಿ 15 ಆಟಗಾರರ ಹೆಸರನ್ನು ಬಿಸಿಸಿಐ ಘೋಷಣೆ ಮಾಡಿದೆ.
ಇದನ್ನೂ ಓದಿ:ಕ್ಯಾಸಿನೊ ಗೇಮ್ನಲ್ಲಿ ಕೋಟಿ ಕೋಟಿ ಹಣ ಗೆದ್ದ.. ಖುಷಿಯಲ್ಲಿ ಇರುವಾಗಲೇ ಕಾರ್ಡಿಕ್ ಅರೆಸ್ಟ್, ದುರಂತ ಸಾವು
ಇದೀಗ ಗಿಲ್ ಅವರನ್ನೂ ನಾಯಕರನ್ನಾಗಿ ನೋಡಬಹುದು ಎಂದು ಈ ಹಿಂದೆ ಹೇಳಿತ್ತು. ಅದರಂತೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಶುಭ್ಮನ್ ಗಿಲ್ ನೇತೃತ್ವದಲ್ಲಿ ಬಿಸಿಸಿಐ ಹೊಸ ತಂಡವನ್ನೂ ಪ್ರಕಟಿಸಿದೆ. ಜುಲೈ 6 ರಿಂದ ಜಿಂಬಾಬ್ವೆ ಜೊತೆಗಿನ ಪಂದ್ಯಗಳು ಆರಂಭವಾಗಲಿವೆ. ಎರಡನೇ ಪಂದ್ಯ ಜುಲೈ 7 ರಂದು ನಡೆಯುತ್ತದೆ. ಆದರೆ ಮೂರನೇ ಪಂದ್ಯ ಜುಲೈ 10 ರಂದು ನಡೆಯಲಿದೆ. 4ನೇ ಪಂದ್ಯ ಜುಲೈ 13 ರಂದು ಮತ್ತು ಐದನೇ ಪಂದ್ಯ ಜುಲೈ 14 ರಂದು ನಡೆಯಲಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿಂದು ಯಾರಾಗ್ತಾರೆ ಮ್ಯಾಚ್ ವಿನ್ನರ್..? ಎಲ್ಲರ ಕಣ್ಣು ಈ ಆಲ್ರೌಂಡರ್ ಮೇಲೆ!
? NEWS
India’s squad for tour of Zimbabwe announced.#TeamIndia | #ZIMvIND
— BCCI (@BCCI)
🚨 NEWS
India’s squad for tour of Zimbabwe announced.#TeamIndia | #ZIMvIND— BCCI (@BCCI) June 24, 2024
">June 24, 2024
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ಬೂಮ್ರಾ, ಶಮಿ, ಸಿರಾಜ್, ರಿಷಬ್ ಪಂತ್ ಸೇರಿದಂತೆ ಈ ಹಿಂದಿನ ಎಲ್ಲ ಆಟಗಾರರಿಗೆ ಬಿಸಿಸಿಐ ಕೊಕ್ ನೀಡಿದೆ. ಹೊಸ ತಂಡವನ್ನು ಇದೀಗ ಪ್ರಕಟಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ